ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್ ॥
ಎಲೈ ಮಹಾಬಾಹೋ! ಸಂಪೂರ್ಣ ಕರ್ಮಗಳ ಸಿದ್ಧಿಗೆ ಈ ಐದು ಕಾರಣಗಳನ್ನು, ಕರ್ಮಗಳನ್ನು ಮುಗಿಸಲು ಉಪಾಯವನ್ನು ತಿಳಿಸುವ ಸಾಂಖ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅವುಗಳನ್ನು ನೀನು ನನ್ನಿಂದ ಚೆನ್ನಾಗಿ ತಿಳಿದುಕೋ. ॥13॥