ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ ॥
ಆದ್ದರಿಂದ ಎಲೈ ಪಾರ್ಥಾ! ಈ ಯಜ್ಞ, ದಾನ, ತಪೋರೂಪೀ ಕರ್ಮಗಳನ್ನು ಹಾಗೂ ಇತರ ಸಮಸ್ತ ಕರ್ತವ್ಯ ಕರ್ಮಗಳನ್ನು ಆಸಕ್ತಿ ಮತ್ತು ಫಲಗಳನ್ನು ತ್ಯಜಿಸಿ ಅವಶ್ಯವಾಗಿ ಮಾಡಬೇಕು. ಇದು ನನ್ನ ನಿಶ್ಚಿತವಾದ ಉತ್ತಮ ಅಭಿಪ್ರಾಯವಾಗಿದೆ. ॥6॥