ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ ।
ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ॥
ಎಲೈ ಕುಂತೀಪುತ್ರನೇ! ಜ್ಞಾನಯೋಗದ ಅಂತಿಮ ಸ್ಥಿತಿಯಾದ ನೈಷ್ಕರ್ಮ್ಯ ಸಿದ್ಧಿಯನ್ನು ಹೇಗೆ ಪಡೆದುಕೊಂಡು ಮನುಷ್ಯನು ಬ್ರಹ್ಮನನ್ನು ಪಡೆದುಕೊಳ್ಳುವನೋ, ಆ ರೀತಿಯನ್ನು ಸಂಕ್ಷೇಪವಾಗಿ ನನ್ನಿಂದ ನೀನು ಕೇಳು. ॥50॥