ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್ ।
ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ ॥
ಚೆನ್ನಾಗಿ ಆಚರಿಸಲಾದ ಬೇರೆಯವರ ಧರ್ಮಕ್ಕಿಂತ, ಗುಣರಹಿತವಾಗಿದ್ದರೂ ತನ್ನ ಧರ್ಮವು ಶ್ರೇಷ್ಠವಾಗಿದೆ. ಏಕೆಂದರೆ ಸ್ವಭಾವದಿಂದ ನಿಯಮಿಸಲ್ಪಟ್ಟ ಸ್ವಧರ್ಮರೂಪೀ ಕರ್ಮವನ್ನು ಮಾಡುವವನಿಗೆ ಪಾಪವು ತಟ್ಟುವುದಿಲ್ಲ. ॥47॥