ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ ।
ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥
ಎಲೈ ಪಾರ್ಥನೇ! ದುಷ್ಟಬುದ್ಧಿಯುಳ್ಳ ಮನುಷ್ಯನು ಯಾವ ಧಾರಣ ಶಕ್ತಿಯಿಂದ ನಿದ್ದೆ, ಭಯ, ಚಿಂತೆ, ದುಃಖ ಮತ್ತು ಉನ್ಮತ್ತತೆಯನ್ನೂ ಬಿಡುವುದಿಲ್ಲವೋ ಅರ್ಥಾತ್ ಧರಿಸಿಕೊಂಡಿರುವನೋ, ಆ ಧಾರಣಶಕ್ತಿಯು ತಾಮಸಿಯಾಗಿದೆ. ॥35॥