ಪ್ರವೃತ್ತಿಂ ಚ ನಿವೃತ್ತಿ ಚಕಾರ್ಯಾಕಾರ್ಯೇ ಭಯಾಭಯೇ ।
ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥
ಎಲೈ ಪಾರ್ಥ! ಪ್ರವೃತ್ತಿಮಾರ್ಗ ಮತ್ತು ನಿವೃತ್ತಿಮಾರ್ಗ, ಕರ್ತವ್ಯ ಹಾಗೂ ಅಕರ್ತವ್ಯ, ಭಯ ಮತ್ತು ಅಭಯ ಹಾಗೆಯೇ ಬಂಧನ ಹಾಗೂ ಮೋಕ್ಷ ಇವನ್ನು ಯಥಾರ್ಥವಾಗಿ ತಿಳಿಯುವ ಬುದ್ಧಿಯು ಸಾತ್ತ್ವಿಕವಾಗಿದೆ. ॥30॥