ರಾಗೀ ಕರ್ಮಫಲಪ್ರೇಪ್ಸುರ್ಲುಬ್ಧೋ ಹಿಂಸಾತ್ಮಕೋಽಶುಚಿಃ ।
ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ॥
ಆಸಕ್ತಿಯಿಂದ ಕೂಡಿದವನಾಗಿ, ಕರ್ಮಗಳ ಫಲಗಳನ್ನು ಬಯಸುತ್ತಾ, ಲೋಭಿ, ಇತರರಿಗೆ ಕಷ್ಟಕೊಡುವ ಸ್ವಭಾವವುಳ್ಳ, ಅಶುದ್ಧ ಆಚರಣೆಯುಳ್ಳ ಮತ್ತು ಹರ್ಷ-ಶೋಕಗಳಿಂದ ಕೂಡಿದ ಕರ್ತನನ್ನು ರಾಜಸನೆಂದು ಹೇಳುತ್ತಾರೆ. ॥27॥