ಮುಕ್ತಸಂಗೋಽನಹಂವಾದೀ ಧೃತ್ಯುತ್ಸಾಹಸಮನ್ವಿತಃ ।
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ॥
ಸಂಗರಹಿತನಾಗಿ, ಅಹಂಕಾರದ ಮಾತನ್ನು ಆಡದೆ, ಧೈರ್ಯ, ಉತ್ಸಾಹದಿಂದ ಹಾಗೂ ಕಾರ್ಯವು ಸಿದ್ಧವಾಗಲೀ, ಆಗದಿರಲೀ ಅದರಲ್ಲಿ ಹರ್ಷ-ಶೋಕಾದಿ ವಿಕಾರಗಳಿಂದ ರಹಿತನಾದ ಕರ್ತನನ್ನು ಸಾತ್ತ್ವಿಕನೆಂದು ಹೇಳಲಾಗುತ್ತದೆ. ॥26॥