ಯಸ್ಯ ನಾಹಂಕೃತೋಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ ।
ಹತ್ವಾಪಿ ಸ ಇಮಾಂಲ್ಲೋಕಾನ್ನ ಹಂತಿ ನ ನಿಬಧ್ಯತೇ ॥
ಯಾವ ಪುರುಷನ ಅಂತಃಕರಣದಲ್ಲಿ ‘ನಾನು ಕರ್ತಾ ಆಗಿದ್ದೇನೆ’ ಎಂಬ ಭಾವ ಇರುವುದಿಲ್ಲವೋ, ಹಾಗೆಯೇ ಯಾರ ಬುದ್ಧಿಯು ಸಾಂಸಾರಿಕ ಪದಾರ್ಥಗಳಲ್ಲಿ ಮತ್ತು ಕರ್ಮಗಳಲ್ಲಿ ಅಂಟಿಕೊಳ್ಳುವುದಿಲ್ಲವೋ, ಆ ಮನುಷ್ಯನು ಎಲ್ಲ ಜನರನ್ನು ಕೊಂದರೂ ವಾಸ್ತವಿಕವಾಗಿ ಕೊಲ್ಲುವುದಿಲ್ಲ ಹಾಗೂ ಅವನು ಪಾಪದಿಂದ ಬಂಧಿತನಾಗುವುದೂ ಇಲ್ಲ. ॥17॥