ಸತ್ತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ ।
ಶ್ರದ್ಧಾಮಯೋಽಯಂ ಪುರುಷೋ ಯೋ ಯಚ್ಛದ್ಧಃ ಸ ಏವ ಸಃ ॥
ಎಲೈ ಅರ್ಜುನ! ಎಲ್ಲ ಮನುಷ್ಯರ ಶ್ರದ್ಧೆಯು ಅವರವರ ಅಂತಃಕರಣಕ್ಕನು ರೂಪವಾಗಿ ಇರುತ್ತದೆ. ಈ ಪುರುಷನು ಶ್ರದ್ಧಾಮಯನಾಗಿದ್ದಾನೆ. ಆದ್ದರಿಂದ ಯಾವ ಮನುಷ್ಯನು ಎಂತಹ ಶ್ರದ್ಧೆಯುಳ್ಳವನೋ ಅವನು ಅದೇ ಆಗಿದ್ದಾನೆ. ಅರ್ಥಾತ್ ಆ ಶ್ರದ್ಧೆಗನುಸಾರವೇ ಅವನ ಸ್ವರೂಪ ಇರುತ್ತದೆ. ॥3॥