BG 17.23 ಓಂ ತತ್ಸದಿತಿ ನಿರ್ದೆಶೋ Posted on November 25, 2008 by VivekaVani ಓಂ ತತ್ಸದಿತಿ ನಿರ್ದೆಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ ।ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ ॥ ಓಂ, ತತ್, ಸತ್ – ಹೀಗೆ ಮೂರು ಪ್ರಕಾರದ ಹೆಸರುಗಳು ಓರ್ವ ಸಚ್ಚಿದಾನಂದಘನ ಬ್ರಹ್ಮನದ್ದೇ ಆಗಿವೆ. ಅವುಗಳಿಂದಲೇ ಸೃಷ್ಟಿಯ ಆದಿಯಲ್ಲಿ ಬ್ರಾಹ್ಮಣ, ವೇದ ಹಾಗೂ ಯಜ್ಞಾದಿಗಳು ರಚಿತವಾಗಿವೆ. ॥23॥