ಅಸೌ ಮಯಾ ಹತಃ ಶತ್ರುರ್ಹನಿಷ್ಯೇ ಚಾಪರಾನಪಿ ।
ಈಶ್ವರೋಽಹಮಹಂ ಭೋಗೀ ಸಿದ್ಧೋಽಹಂ ಬಲವಾನ್ ಸುಖೀ ॥
ಈ ಶತ್ರುವನ್ನು ನಾನು ಕೊಂದೆ ಮತ್ತು ಆ ಇತರ ಶತ್ರುಗಳನ್ನೂ ನಾನು ಕೊಲ್ಲುವೆನು. ನಾನೇ ಈಶ್ವರನಾಗಿದ್ದೇನೆ, ಐಶ್ವರ್ಯವನ್ನು ಭೋಗಿಸುವವನಾಗಿದ್ದೇನೆ. ನಾನು ಎಲ್ಲ ಸಿದ್ಧಿಗಳಿಂದ ಕೂಡಿರುವೆನು ಮತ್ತು ಬಲಶಾಲಿಯೂ, ಸುಖಿಯೂ ಆಗಿದ್ದೇನೆ. ॥14॥