ಉತ್ಕ್ರಾಮಂತಂ ಸ್ಥಿತಂ ವಾಪಿಭುಂಜಾನಂವಾ ಗುಣಾನ್ವಿತಮ್ ।
ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ ॥
ಶರೀರವನ್ನು ಬಿಟ್ಟು ಹೋಗುವಾಗ ಇಲ್ಲವೇ ಶರೀರದಲ್ಲಿ ಇರುವಾಗ ಅಥವಾ ವಿಷಯಗಳನ್ನು ಭೋಗಿಸುವಾಗ, ಇಲ್ಲವೇ ಮೂರು ಗುಣಗಳಿಂದ ಕೂಡಿರುವಾಗಲೂ (ಆ ಆತ್ಮಸ್ವರೂಪವನ್ನು) ಅಜ್ಞಾನಿಗಳು ತಿಳಿಯಲಾರರು. ಕೇವಲ ಜ್ಞಾನರೂಪೀ ದೃಷ್ಟಿಯುಳ್ಳ ವಿವೇಕೀ ಜ್ಞಾನಿಗಳೇ ತತ್ತ್ವದಿಂದ ತಿಳಿಯುತ್ತಾರೆ. ॥10॥