ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ
ಗುಣಪ್ರವೃದ್ಧಾ ವಿಷಯಪ್ರವಾಲಾಃ ।
ಅಧಶ್ಚಮೂಲಾನ್ಯನುಸಂತತಾನಿ
ಕರ್ಮಾನುಬಂಧೀನಿ ಮನುಷ್ಯಲೋಕೇ ॥
ಆ ಜಗತ್ವೃಕ್ಷಕ್ಕೆ – ತ್ರಿಗುಣರೂಪೀ ನೀರಿನಿಂದ ಬೆಳೆದಿರುವ ವಿಷಯ ಭೋಗರೂಪೀ ಚಿಗುರುಗಳುಳ್ಳ ದೇವ, ಮನುಷ್ಯ ಮತ್ತು ತಿರ್ಯಕ್ ಮೊದಲಾದ ಯೋನಿರೂಪವಾದ ರೆಂಬೆಗಳು ಕೆಳಗೆ, ಮೇಲೆ ಎಲ್ಲೆಲ್ಲಿಯೂ ಹರಡಿಕೊಂಡಿವೆ ಹಾಗೂ ಮನುಷ್ಯ ಜನ್ಮದಲ್ಲಿ ಕರ್ಮಗಳಿಗನುಸಾರ ಬಂಧಿಸುವಂತಹ ಅಹಂತೆ, ಮಮತೆ ಮತ್ತು ವಾಸನಾರೂಪೀ ಬೀಳಲುಗಳೂ ಮೇಲೆ, ಕೆಳಗೆ ಎಲ್ಲ ಲೋಕಗಳಲ್ಲಿ ಹರಡಿಕೊಂಡಿವೆ. ॥2॥