ಕೈರ್ಲಿಂಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ ॥
ಅರ್ಜುನನು ಹೇಳಿದನು – ಈ ಮೂರು ಗುಣಗಳಿಂದಲೂ ಅತೀತನಾದ ಪುರುಷನು ಯಾವ-ಯಾವ ಲಕ್ಷಣಗಳಿಂದ ಕೂಡಿರುತ್ತಾನೆ? ಹಾಗೂ ಅವನ ಆಚರಣೆ ಹೇಗಿರುತ್ತದೆ? ಹಾಗೆಯೇ ಪ್ರಭುವೇ! ಮನುಷ್ಯನು ಯಾವ ಉಪಾಯದಿಂದ ಈ ಮೂರು ಗುಣಗಳನ್ನು ದಾಟಿ ಹೋಗುತ್ತಾನೆ? ॥21॥