ಶ್ರೀಭಗವಾನುವಾಚ
ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ।
ಯಜ್ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ॥
ಶ್ರೀಭಗವಂತನು ಹೇಳಿದನು – ಜ್ಞಾನಗಳಲ್ಲಿ ಅತ್ಯುತ್ತಮವಾದ ಪರಮ ಜ್ಞಾನವನ್ನು ನಾನು ನಿನಗೆ ಪುನಃ ಹೇಳುವೆನು. ಅದನ್ನು ತಿಳಿದು ಎಲ್ಲ ಮುನಿಜನರು ಈ ಜಗತ್ತಿನಿಂದ ಮುಕ್ತರಾಗಿ ಪರಮ ಸಿದ್ಧಿಯನ್ನು ಪಡೆದಿದ್ದಾರೆ. ॥1॥