ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ ॥
ಸತ್ತ್ವಗುಣದಲ್ಲಿ ಸ್ಥಿತರಾದ ಮನುಷ್ಯರು ಸ್ವರ್ಗಾದಿ ಉಚ್ಚ ಲೋಕಗಳಿಗೆ ಹೋಗುತ್ತಾರೆ. ರಜೋಗುಣದಲ್ಲಿ ನೆಲೆಸಿದವರು ಮಧ್ಯದಲ್ಲಿ ಅರ್ಥಾತ್ ಮನುಷ್ಯ ಲೋಕದಲ್ಲೇ ಇರುತ್ತಾರೆ ಮತ್ತು ತಮೋಗುಣದ ಕಾರ್ಯರೂಪೀ ನಿದ್ದೆ, ಪ್ರಮಾದ, ಆಲಸ್ಯಾದಿಗಳಲ್ಲಿ ನೆಲೆನಿಂತ ತಾಮಸ ಪುರುಷರು ಅಧೋಗತಿಗೆ ಅಂದರೆ, ಕೀಟ, ಪಶು ಮೊದಲಾದ ನೀಚ ಯೋನಿಗಳಲ್ಲಿ ಹಾಗೂ ನರಕಗಳಿಗೆ ಹೋಗುತ್ತಾರೆ. ॥18॥