ಅಪ್ರಕಾಶೋಽಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ ।
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ ॥
ಎಲೈ ಅರ್ಜುನ! ತಮೋಗುಣವು ಹೆಚ್ಚಾದಾಗ ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ, ಕರ್ತವ್ಯ ಕರ್ಮಗಳಲ್ಲಿ ಅಪ್ರವೃತ್ತಿ, ವ್ಯರ್ಥ ಚೇಷ್ಟೆಗಳು ಹಾಗೂ ನಿದ್ದೆ ಮುಂತಾದವು ಅಂತಃಕರಣವನ್ನು ಮೋಹಿತಗೊಳಿಸುವ ವೃತ್ತಿಗಳು – ಇವೆಲ್ಲವೂ ಉಂಟಾಗುತ್ತವೆ. ॥13॥