ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ ।
ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಭ್ಯಸೂಯತಿ ॥
ಈ ಗೀತಾರೂಪೀ ರಹಸ್ಯಮಯ ಉಪದೇಶವನ್ನು ಎಂದಿಗೂ ತಪಸ್ಸು ಮಾಡದ ಮನುಷ್ಯನಿಗೆ ಹೇಳಬೇಡ.
ಹಾಗೆಯೇ ಭಕ್ತಿಹೀನ ಮನುಷ್ಯನಿಗೆ ಹಾಗೆಯೇ ಕೇಳುವ ಇಚ್ಛೆ ಇಲ್ಲದವನಿಗೂ ಹೇಳಬಾರದು ಹಾಗೂ ನನ್ನಲ್ಲಿ ದೋಷ ದೃಷ್ಟಿಯನ್ನಿರಿಸುವನಿಗಂತೂ ಎಂದಿಗೂ ಹೇಳಬಾರದು. ॥67॥