ಭಕ್ತ್ಯಾ ಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ತ್ವತಃ ।
ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಮ್ ॥
ಆ ಪರಾಭಕ್ತಿಯ ಮೂಲಕ ಅವನು ಪರಮಾತ್ಮನಾದ ನನ್ನನ್ನು ‘ನಾನು ಹೇಗಿರುವೆನೋ ಹಾಗೆಯೇ’ ಸರಿಯಾಗಿ ತತ್ತ್ವಶಃ ತಿಳಿಯುತ್ತಾನೆ. ಹಾಗೆಯೇ ಆ ಭಕ್ತಿಯಿಂದ ನನ್ನನ್ನು ತತ್ತ್ವದಿಂದ ತಿಳಿದ ಕೂಡಲೇ ನನ್ನಲ್ಲಿ ಪ್ರವಿಷ್ಟನಾಗುತ್ತಾನೆ. ॥55॥