ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ ।
ಅಭ್ಯಾಸಾದ್ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ॥
ಯತ್ತದಗ್ರೇ ವಿಷಮಿವ ಪರಿಣಾಮೇಽಮೃತೋಪಮಮ್ ।
ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ ॥
ಎಲೈ ಭರತಶ್ರೇಷ್ಠಾ! ಈಗ ಮೂರು ಪ್ರಕಾರದ ಸುಖವನ್ನು ಕೂಡ ನನ್ನಿಂದ ನೀನು ಕೇಳು. ಯಾವ ಸುಖದಲ್ಲಿ ಸಾಧಕನು ಭಜನೆ, ಧ್ಯಾನ ಮತ್ತು ಸೇವೆ ಮೊದಲಾದ ಅಭ್ಯಾಸದಲ್ಲಿ ರಮಿಸುತ್ತಾನೋ ಮತ್ತು ಯಾವುದರಿಂದ ಅವನ ದುಃಖ ಇಲ್ಲವಾಗುತ್ತದೋ, ಇದು ಪ್ರಾರಂಭದಲ್ಲಿ ವಿಷದಂತೆ ಕಂಡರೂ ಪರಿಣಾಮದಲ್ಲಿ ಅಮೃತಕ್ಕೆ ಸಮಾನವಾಗಿರುತ್ತದೆ. ಅದು ಪರಮಾತ್ಮನ ವಿಷಯಕ ಬುದ್ಧಿಯ ಪ್ರಸಾದದಿಂದ ಉಂಟಾಗುತ್ತದೆ. ಆ ಸುಖವನ್ನು ಸಾತ್ತ್ವಿಕ ಸುಖವೆಂದು ಹೇಳಲಾಗಿದೆ. ॥36-37॥