ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ ।
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥
ಎಲೈ ಪಾರ್ಥನೆ! ಯಾವ ಅವ್ಯಭಿಚಾರಿಣಿಯಾದ ಧಾರಣ ಶಕ್ತಿಯಿಂದ ಮನುಷ್ಯನು ಧ್ಯಾನಯೋಗದಿಂದ ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ಕ್ರಿಯೆಗಳನ್ನು ಧಾರಣೆ ಮಾಡುತ್ತಾನೋ, ಆ ಧೃತಿಯು ಸಾತ್ತ್ವಿಕವಾಗಿದೆ. ॥33॥