ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ ॥
ಎಲೈ ಪುರುಷಶ್ರೇಷ್ಠ ಅರ್ಜುನ! ಸಂನ್ಯಾಸ ಮತ್ತು ತ್ಯಾಗ ಇವೆರಡರಲ್ಲಿ ಮೊದಲು ತ್ಯಾಗದ ವಿಷಯದಲ್ಲಿ ನನ್ನ ನಿಶ್ಚಯವನ್ನು ಕೇಳು, ಏಕೆಂದರೆ ತ್ಯಾಗವು ಸಾತ್ತ್ವಿಕ, ರಾಜಸ ಹಾಗೂ ತಾಮಸ ಎಂಬ ಭೇದದಿಂದ ಮೂರು ಪ್ರಕಾರದ್ದೆಂದು ಹೇಳಲಾಗಿದೆ. ॥4॥