BG 15.20 ಇತಿ ಗುಹ್ಯತಮಂ ಶಾಸ್ತ್ರ Posted on November 25, 2008 by VivekaVani ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾನಘ ।ಏತದ್ಬುದ್ಧ್ವಾ ಬುದ್ಧಿಮಾನ್ ನ್ಸ್ಯಾತ್ಕೃತಕೃತ್ಯಶ್ಚ ಭಾರತ ॥ ಎಲೈ ನಿಷ್ಪಾಪನಾದ ಅರ್ಜುನ! ಹೀಗೆ ಈ ಅತಿರಹಸ್ಯಮಯ ಗೋಪ್ಯವಾದ ಶಾಸ್ತ್ರವನ್ನು ನಾನು ನಿನಗೆ ಹೇಳಿದೆನು. ಇದನ್ನು ತತ್ತ್ವಶಃ ತಿಳಿದ ಮನುಷ್ಯನು ಜ್ಞಾನಿಯೂ ಮತ್ತು ಕೃತಾರ್ಥನೂ ಆಗುತ್ತಾನೆ. ॥20॥