ನಿರ್ಮಾನಮೋಹಾ ಜಿತಸಂಗದೋಷಾ
ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ ।
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈ-
ರ್ಗಚ್ಛಂತ್ಯಮೂಢಾಃ ಪದಮವ್ಯಯಂ ತತ್ ॥
ಮಾನ-ದೊಡ್ಡಸ್ತಿಕೆ ಮತ್ತು ಮೋಹ ನಾಶವಾಗಿರುವ, ಆಸಕ್ತಿರೂಪ ದೋಷವನ್ನು ಜಯಿಸಿದ, ಪರಮಾತ್ಮನ ಸ್ವರೂಪದಲ್ಲಿ ನಿತ್ಯಸ್ಥಿತಿಯಿರುವ ಹಾಗೆಯೇ ಕಾಮನೆಗಳು ಪೂರ್ಣವಾಗಿ ನಾಶವಾದ, ಸುಖ-ದುಃಖಗಳೆಂಬ ದ್ವಂದ್ವಗಳಿಂದ ವಿಮುಕ್ತರಾದ ಜ್ಞಾನೀಜನರು ಅವಿನಾಶೀ ಪರಮಪದವನ್ನು ಪಡೆಯುತ್ತಾರೆ. ॥5॥