ತತಃ ಪದಂ ತತ್ಪರಿಮಾರ್ಗಿತವ್ಯಂ
ಯಸ್ಮಿನ್ಗತಾ ನ ನಿವರ್ತಂತಿ ಭೂಯಃ ।
ತಮೇವ ಚಾದ್ಯಂ ಪುರುಷಂ ಪ್ರಪದ್ಯೇ
ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ॥
ಬಳಿಕ ಆ ಪರಮಪದರೂಪೀ ಪರಮೇಶ್ವರನನ್ನು ಚೆನ್ನಾಗಿ ಅರಸಬೇಕು. ಅಲ್ಲಿಗೆ ಹೋಗಿರುವ ಪುರುಷರು ಮತ್ತೆ ಸಂಸಾರಕ್ಕೆ ಬರುವುದಿಲ್ಲ ಹಾಗೂ ಯಾವ ಪರಮೇಶ್ವರನಿಂದ ಪುರಾತನ ಜಗದ್ರೂಪೀ ವೃಕ್ಷದ ಪರಂಪರೆ ವಿಸ್ತಾರಗೊಂಡಿದೆಯೋ ಆ ಆದಿಪುರುಷ ನಾರಾಯಣನಿಗೆ ನಾನು ಶರಣಾಗಿದ್ದೇನೆ ಎಂಬ ದೃಢ ನಿಶ್ಚಯದಿಂದ ಆ ಪರಮೇಶ್ವರನನ್ನು ಮನನ ಮತ್ತು ನಿದಿಧ್ಯಾಸನ ಮಾಡಬೇಕು. ॥4॥