ನ ರೂಪಮಸ್ಯೇಹ ತಥೋಪಲಭ್ಯತೇ-
ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ ।
ಅಶ್ವತ್ಥಮೇನಂ ಸುವಿರೂಢಮೂಲ-
ಮಸಂಗಶಸ್ತ್ರೇಣ ದೃಢೇನ ಛಿತ್ತ್ವಾ॥
ಈ ಸಂಸಾರವೃಕ್ಷದ ಸ್ವರೂಪವು ಹೇಗೆ ಹೇಳಲಾಗಿದೆಯೋ ಹಾಗೆ ಇಲ್ಲಿ ವಿಚಾರಕಾಲದಲ್ಲಿ ಕಂಡುಬರುವುದಿಲ್ಲ. ಏಕೆಂದರೆ ಇದರ ಆದಿಯಾಗಲೀ, ಅಂತ್ಯವಾಗಲೀ ಇಲ್ಲ. ಹಾಗೆಯೇ ಅದರ ಉತ್ತಮ ರೀತಿಯ ಸ್ಥಿರತೆಯೂ ಇಲ್ಲ. ಅದಕ್ಕಾಗಿ ಈ ಅಹಂತೆ, ಮಮತೆ ಮತ್ತು ವಾಸನಾರೂಪೀ ಬಹಳ ಗಟ್ಟಿಯಾದ ಬೇರುಗಳುಳ್ಳ ಜಗತ್ರೂಪೀ ಅಶ್ವತ್ಥವೃಕ್ಷವನ್ನು ದೃಢವಾದ ವೈರಾಗ್ಯರೂಪೀ ಶಸದಿಂದ ಕತ್ತರಿಸಿ – ॥3॥