ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್ ।
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ॥
ಶ್ರೀಭಗವಂತನು ಹೇಳಿದನು – ಆದಿಪುರುಷ ಪರಮೇಶ್ವರನು ಬೇರು ಆಗಿರುವ, ಬ್ರಹ್ಮದೇವರೇ ಮುಖ್ಯಕಾಂಡವಾಗಿರುವ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಅವಿನಾಶೀ ಎಂದು ಹೇಳುತ್ತಾರೆ. ಹಾಗೆಯೇ ವೇದಗಳು ಅದರ ಎಲೆಗಳೆಂದು ಹೇಳಲಾಗಿದೆ. ಆ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಮೂಲಸಹಿತ ತತ್ತ್ವತಃ ತಿಳಿದವನು ವೇದಗಳ ತಾತ್ಪರ್ಯವನ್ನು ತಿಳಿದವನಾಗಿದ್ದಾನೆ. ॥1॥