ಶ್ರೀಭಗವಾನುವಾಚ
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ॥
ಶ್ರೀಭಗವಂತನು ಹೇಳಿದನು – ಎಲೈ ಅರ್ಜುನ ! ಯಾವ ಪರುಷನು ಸತ್ತ್ವಗುಣದ ಕಾರ್ಯರೂಪೀ ಪ್ರಕಾಶವನ್ನು, ರಜೋಗುಣದ ಕಾರ್ಯರೂಪೀ ಪ್ರವೃತ್ತಿಯನ್ನು ಮತ್ತು ತಮೋಗುಣದ ಕಾರ್ಯರೂಪೀ ಮೋಹ ಇವುಗಳು ಪ್ರಾಪ್ತವಾದರೂ ಅವುಗಳನ್ನು ದ್ವೇಷಿಸುವುದಿಲ್ಲ ಹಾಗೂ ನಿವೃತ್ತನಾದ ಮೇಲೆ ಅವುಗಳನ್ನು ಬಯಸುವುದಿಲ್ಲ. ॥22॥