ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ ।
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ ॥
ಎಲೈ ಅರ್ಜುನ! ರಜೋಗುಣ ಮತ್ತು ತಮೋಗುಣಗಳನ್ನು ಅದುಮಿ ಸತ್ತ್ವಗುಣವು ವೃದ್ಧಿಸುತ್ತದೆ. ಸತ್ತ್ವಗುಣ ಹಾಗೂ ತಮೋಗುಣಗಳನ್ನು ಅದುಮಿ ರಜೋಗುಣವು ಬೆಳೆಯುತ್ತದೆ, ಹಾಗೆಯೇ ಸತ್ತ್ವಗುಣ ಮತ್ತು ರಜೋಗುಣಗಳನ್ನು ಅದುಮಿ ತಮೋಗುಣವು ಬೆಳೆಯುತ್ತದೆ. ॥10॥