ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ ।
ಅಸದಿತ್ಯುಚ್ಯತೇ ಪಾರ್ಥ ನ ಚ ತತ್ಪ್ರೇತ್ಯ ನೋ ಇಹ ॥
ಎಲೈ ಅರ್ಜುನ! ಶ್ರದ್ಧೆಯಿಲ್ಲದೆ ಮಾಡಿದ ಹವನ, ಕೊಟ್ಟ ದಾನ, ಮಾಡಿದ ತಪಸ್ಸು ಮತ್ತು ಮಾಡಿದ ಶುಭಕರ್ಮಗಳೆಲ್ಲವೂ ‘ಅಸತ್’ ಎಂದು ಹೇಳಲಾಗುತ್ತದೆ. ಆದ್ದರಿಂದ ಅದು ಈ ಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ಲಾಭದಾಯಕವಾಗುವುದಿಲ್ಲ. ॥28॥