BG 17.19 ಮೂಢಗ್ರಾಹೇಣಾತ್ಮನೋ Posted on November 25, 2008 by VivekaVani ಮೂಢಗ್ರಾಹೇಣಾತ್ಮನೋ ಯತ್ಪೀಡಯಾ ಕ್ರಿಯತೇ ತಪಃ ।ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಮ್ ॥ ಮೂರ್ಖತೆಯಿಂದ, ಹಟದಿಂದ, ಮನಸ್ಸು, ವಾಣಿ, ಶರೀರಕ್ಕೆ ಕಷ್ಟಕೊಟ್ಟು ಅಥವಾ ಇತರರಿಗೆ ಅನಿಷ್ಟ ಮಾಡುವುದಕ್ಕಾಗಿ ಮಾಡಲಾಗುವ ತಪಸ್ಸನ್ನು ತಾಮಸವೆಂದು ಹೇಳಲಾಗಿದೆ. ॥19॥