ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ ।
ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ ॥
ಕಹಿ, ಹುಳಿ, ಹೆಚ್ಚು ಉಪ್ಪಿನಿಂದ ಕೂಡಿದ, ಹೆಚ್ಚು ಬಿಸಿ, ಹೆಚ್ಚು ಖಾರ, ಹುರಿದಿರುವ, ಉರಿಯನ್ನುಂಟುಮಾಡುವ, ದುಃಖ, ಚಿಂತೆ ಹಾಗೂ ರೋಗಗಳನ್ನುಂಟು ಮಾಡುವ ಭೋಜನ ಪದಾರ್ಥಗಳು ರಾಜಸ ಜನರಿಗೆ ಪ್ರಿಯವಾಗಿರುತ್ತವೆ. ॥9॥