ಆಢ್ಯೋಽಭಿಜನವಾನಸ್ಮಿ ಕೋಽನ್ಯೋಽಸ್ತಿ ಸದೃಶೋ ಮಯಾ।
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾಃ ॥
ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಽಶುಚೌ ॥
ನಾನು ದೊಡ್ಡ ಶ್ರೀಮಂತ ಮತ್ತು ದೊಡ್ಡ ಮನೆತನದಲ್ಲಿ ಹುಟ್ಟಿದವನು. ನನಗೆ ಸಮಾನರು ಬೇರೆ ಯಾರಿದ್ದಾರೆ? ನಾನು ಯಜ್ಞವನ್ನು ಮಾಡುವೆನು, ದಾನ ಕೊಡುವೆನು, ಆಮೋದ-ಪ್ರಮೋದ ಮಾಡುವೆನು. ಹೀಗೆ ಅಜ್ಞಾನದಿಂದ ಮೋಹಿತರಾಗಿ, ಅನೇಕ ಪ್ರಕಾರದಿಂದ ಭ್ರಮಿತ ಚಿತ್ತವುಳ್ಳವರು, ಮೋಹಜಾಲದಲ್ಲಿ ಸಿಕ್ಕಿಹಾಕಿಕೊಂಡು, ವಿಷಯ ಭೋಗಗಳಲ್ಲಿ ಅತ್ಯಂತ ಆಸಕ್ತರಾದ ಆಸುರೀ ಜನರು ಮಹಾ ಅಪವಿತ್ರ ನರಕದಲ್ಲಿ ಬೀಳುತ್ತಾರೆ. ॥15-16॥