ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।
ಅಪರಸ್ಪರಸಂಭೂತಂ ಕಿಮನ್ಯತ್ಕಾಮಹೈತುಕಮ್ ॥
ಆ ಆಸುರೀ ಸ್ವಭಾವದ ಜನರು – ಈ ಜಗತ್ತು ಆಶ್ರಯರಹಿತ, ಸರ್ವಥಾ ಅಸತ್ಯ ಮತ್ತು ದೇವರಿಲ್ಲದೆಯೇ ತನ್ನಿಂದ ತಾನೇ ಕೇವಲ ಸ್ತ್ರೀ-ಪುರುಷರ ಸಂಯೋಗದಿಂದ ಸೃಷ್ಟಿಯಾಗಿದೆ. ಆದ್ದರಿಂದ ಕಾಮವೇ ಇದರ ಕಾರಣವಾಗಿದೆ. ಇದಲ್ಲದೆ ಬೇರೇನಿದೆ? ಎಂದು ಹೇಳುತ್ತಾರೆ. ॥8॥