ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾಂತಿರಪೈಶುನಮ್ ।
ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್ ॥
ಮನಸ್ಸು, ಮಾತು, ಶರೀರದಿಂದ ಯಾರಿಗೂ ಯಾವ ರೀತಿಯಿಂದಲೂ ಕಷ್ಟಕೊಡದಿರುವುದು, ಯಥಾರ್ಥ ಹಾಗೂ ಪ್ರಿಯವಾಗಿ ಮಾತನಾಡುವುದು, ತನಗೆ ಅಪಕಾರ ಮಾಡಿದವರ ಮೇಲೆ ಸಿಟ್ಟಾಗದಿರುವುದು, ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನ ತ್ಯಾಗ, ಅಂತಃಕರಣದಲ್ಲಿ ಚಂಚಲತೆ ಇಲ್ಲದಿರುವುದು, ಯಾರನ್ನೂ ನಿಂದಿಸದಿರುವುದು, ಎಲ್ಲ ಪ್ರಾಣಿಗಳಲ್ಲಿ ಕಾರಣರಹಿತ ದಯೆ, ಇಂದ್ರಿಯಗಳು ವಿಷಯಗಳೊಡನೆ ಸಂಯೋಗವಾದರೂ ಅದರಲ್ಲಿ ಆಸಕ್ತರಾಗದಿರುವುದು, ಕೋಮಲತೆ, ಲೋಕ ಮತ್ತು ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆಯಲ್ಲಿ ಲಜ್ಜೆ ಹಾಗೂ ವ್ಯರ್ಥವಾದ ಚೇಷ್ಟೆಯ ಅಭಾವ – ॥2॥