ಶ್ರೀಭಗವಾನುವಾಚ
ಅಭಯಂ ಸತ್ತ್ವಸಂಶುದ್ಧಿರ್ಜ್ಞಾನಯೋಗವ್ಯವಸ್ಥಿತಿಃ ।
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ ॥
ಶ್ರೀಭಗವಂತನು ಹೇಳಿದನು – ಭಯದ ಸರ್ವಥಾ ಅಭಾವ, ಅಂತಃಕರಣದ ಪೂರ್ಣ ನಿರ್ಮಲತೆ, ತತ್ತ್ವಜ್ಞಾನಕ್ಕಾಗಿ ಧ್ಯಾನಯೋಗದಲ್ಲಿ ನಿರಂತರ ದೃಢಸ್ಥಿತಿ ಮತ್ತು ಸಾತ್ವಿಕದಾನ, ಇಂದ್ರಿಯಗಳ ದಮನ, ಭಗವಂತನ, ದೇವತೆಗಳ, ಗುರುಜನರ ಪೂಜೆ, ಅಗ್ನಿಹೋತ್ರಾದಿ ಉತ್ತಮ ಕರ್ಮಗಳ ಆಚರಣೆ, ವೇದ ಶಾಸ್ತ್ರಗಳ ಪಠಣ-ಪಾಠಣ, ಭಗವಂತನ ನಾಮ ಮತ್ತು ಗುಣಗಳ ಕೀರ್ತನೆ, ಸ್ವಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು ಹಾಗೂ ಶರೀರ ಇಂದ್ರಿಯಗಳಸಹಿತ ಅಂತಃಕರಣದ ಸರಳತೆ – ॥1॥